ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿರುವು (ಭಾಗ - ೧)

ಇಮೇಜ್
ತಿರುವು (ಭಾಗ - ೧) ಕರೆ ಬಂದ ಕೂಡಲೇ, ಇದ್ದ ಕೆಲಸಗಳನ್ನು ಬದಿಗಿಟ್ಟು, ನನ್ನ ಮ್ಯಾನೇಜರಿಗೆ ತಿಳಿಸಿ, ನಾಲ್ಕು ದಿನಗಳ ರಜೆ ಪಡೆದು, ಸಿಕ್ಕ ಬಸ್ಸಿಗೆ ಟಿಕೇಟನ್ನು ಪಡೆದು ಹೊರಟೆ. ಮನದಲ್ಲಿ ಸಾವಿರ ದುಗುಡಗಳು, ಆತಂಕ, ಇನ್ನೊಬ್ಬರ ಸಾವಿಗೆ ಕಾರಣ ನಾನಾಗುವೆನೇ ಎಂಬ ಭಯ, ಅದರ ಮಧ್ಯೆ ಸಾವಿರ ಬಾರಿ ಏನು ಆಗದಿರಲೆಂದು ದೇವರಲ್ಲಿ ಮೊರೆ ಹೋಗುತ್ತಿದ್ದೆ. ಎಲ್ಲದರ ಮಧ್ಯೆ, ಪ್ರತಿ ಬಾರಿ, ಇದೇ ಕತೆ. ಬೊಗಳುವ ನಾಯಿ  ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬ ಮಾತಿನಂತೆ, ಇದು ನನ್ನನ್ನು ಹಣಿಸಲು ಮಾಡುತ್ತಿರುವ ಅವನ ಪ್ರಯತ್ನವಷ್ಟೇ ಎಂಬ ಭಂಡ ಧೈರ್ಯ. ೩೦‌ ಮೈಲಿಯ ದಾರಿ. ಕ್ರಮಿಸುತ್ತಾ ಒಂದೊಂದೇ ನೆನಪುಗಳ ಮೈಲಿಗಲ್ಲು ಪಾಸಾಗುತ್ತಿತ್ತು.. ಐದು ವರ್ಷಗಳ ಹಿಂದೆಯೇ, ಬೆಂಬಿಡದ ಭೂತವೊಂದು ನನ್ನ ಬೆನ್ನಟ್ಟಿತ್ತು. ಅವನು ನನ್ನನ್ನು ಅಕ್ಕನ ಮದುವೆಯಲ್ಲಿ ನೋಡಿದ್ದೇ ಮೊದಲು. ಅದೇ ದಿನ ತಂದೆಯ ಬಳಿ ಬಂದು, ಅವನು ನನ್ನನ್ನು ಇಷ್ಟ ಪಡುತ್ತಿರುವುದಾಗಿಯೂ, ಅವನಿಗೂ ನನಗೂ ಮದುವೆ ಮಾಡಿಸಬೇಕೆಂದು ಅವನ ಇಂಗಿತ‌ ವ್ಯಕ್ತಪಡಿಸಿದ. ಅಪ್ಪನಿಗೆ ದಿಗ್ಭ್ರಮೆ, ನಾನಂತೂ ಆಕಾಶ ತಲೆಯ ಮೇಲೆ ಬಿದ್ದವಳಂತಿದ್ದೆ. ನಾನೇನು ಸುಂದರಿಯಲ್ಲ. ಬಣ್ಣವೂ ಕಪ್ಪು, ಮಾತನಾಡುವವಳೂ ಅಲ್ಲ. ಅಲ್ಲದೇ, ಅವನನ್ನು ನಾನೊಮ್ಮೆ ದಿಟ್ಟಿಸಿ ನೋಡಿದ್ದೂ ಇಲ್ಲ. ಇದೆಂತಾ ಪ್ರೀತಿಯಪ್ಪಾ ಅಂದುಕೊಂಡೆ. ಅಪ್ಪ ಅವನ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, ಎಲ್ಲಿಯೋ ಸ್ವಲ್ಪ ಹುಡುಗಾಟಿಕೆಯ ಹುಡುಗ ...