ಪ್ರೀತಿ!

ಪ್ರೀತಿ!


ಮಳೆ ಬಿಸಿಲಿನಾಟದಲಿ ಭುವಿ ಸುಸ್ತಾದಳು..

ಕಾಮನಬಿಲ್ಲು‌ ಮೂಡಿಸಿ ರ‌ವಿ‌‌ ಲಲ್ಲೆಗರೆದ..


------------------


ಮುಸುಕಿನ ಮಂಜಿನಲಿ ಭುವಿ ಶೋಭಿಸುತ್ತಿದ್ದಳು

ರವಿ ಆಗಮಿಸುತ್ತಿದ್ದಂತೆ ನಾಚಿ ನೀರಾದಳು..


------------------


ಮತ್ತೆ ಬಂದ ರಾತ್ರಿಯಲ್ಲಿ ನಗುತ್ತಿದ್ದ ಚಂದಿರ

ಕತ್ತಲೆಂಬ ನೆಪ ಹೇಳಲು ಅವನಿಗೂ ಬೇಸರ!


------------------


ಚಂದ್ರನೂ ಒಮ್ಮೊಮ್ಮೆ ರಂಗೇರುತ್ತಾನೆ;

ಪ್ರೀತಿಯೊಸಗೆ ಸಿಕ್ಕಿದ ಎಲ್ಲರೂ!!


------------------


ರವಿಯ ಉಗ್ರತೆಗೆ ಭುವಿ ಬೆದರಿದಳು

ಶಶಿ ಬಂದು ತಂಗಾಳಿಯ ಸಾಂತ್ವನವಿತ್ತ!

 










ಕಾಮೆಂಟ್‌ಗಳು