ಪ್ರೀತಿ!
ಪ್ರೀತಿ! ಮಳೆ ಬಿಸಿಲಿನಾಟದಲಿ ಭುವಿ ಸುಸ್ತಾದಳು.. ಕಾಮನಬಿಲ್ಲು ಮೂಡಿಸಿ ರವಿ ಲಲ್ಲೆಗರೆದ.. ------------------ ಮುಸುಕಿನ ಮಂಜಿನಲಿ ಭುವಿ ಶೋಭಿಸುತ್ತಿದ್ದಳು ರವಿ ಆಗಮಿಸುತ್ತಿದ್ದಂತೆ ನಾಚಿ ನೀರಾದಳು.. ------------------ ಮತ್ತೆ ಬಂದ ರಾತ್ರಿಯಲ್ಲಿ ನಗುತ್ತಿದ್ದ ಚಂದಿರ ಕತ್ತಲೆಂಬ ನೆಪ ಹೇಳಲು ಅವನಿಗೂ ಬೇಸರ! ------------------ ಚಂದ್ರನೂ ಒಮ್ಮೊಮ್ಮೆ ರಂಗೇರುತ್ತಾನೆ; ಪ್ರೀತಿಯೊಸಗೆ ಸಿಕ್ಕಿದ ಎಲ್ಲರೂ!! ------------------ ರವಿಯ ಉಗ್ರತೆಗೆ ಭುವಿ ಬೆದರಿದಳು ಶಶಿ ಬಂದು ತಂಗಾಳಿಯ ಸಾಂತ್ವನವಿತ್ತ!