ನಾ ನಿನಗೆ,,,...
ನಾ ನಿನಗೆ,,
ಮುಂಜಾನೆಯ ಹಕ್ಕಿಗಳ
ಕಲರವದ ನಡುವಲೂ
ಕಾಡುವ ಹಾಡಾಗಬೇಕು
ಹಳ್ಳಿಯ ಸೊಗಡಿನ
ಲಾಲಿಯಾಗಬೇಕು
ಚಿಂತೆಯ ಶಿರಬೇನೆಗೆ
ನೀ ಹಪಹಪಿಸುವ
ಮಡಿಲಾಗಬೇಕು
ಒತ್ತಡದ ಒಣಬೇಗೆಗೆ
ನಿಶೆಯ ತಂಗಾಳಿಯಾಗಬೇಕು
ಕಣ್ಮುಚ್ಚಿ ಕುಳಿತಾಗ
ಜಗವ ಮರೆಸುವ
ಧ್ಯಾನವಾಗಬೇಕು
ನಿನ್ನ ಕೋರಿಕೆಗಳಲಿ
ಮೊದಲಾಗಬೇಕು
ಕಪ್ಪೆಚಿಪ್ಪನರಸುತ
ತೀರದಲಿ ಕೈಹಿಡಿದು ನಡೆವಂತ
ಆಸೆಯ ಕನಸಾಗಬೇಕು
ಎಚ್ಚೆತ್ತರೂ ಆಲಂಗಿಸುವ
ನಿದಿರಾಗಬೇಕು
ನಟ್ಟಿರುಳಲಿ ನೀ ಬರೆವ
ಉನ್ಮತ್ತ ಭಾವನೆಗಳ
ಕವಿತೆಯಾಗಬೇಕು
ಮನದಲಿ ಅಚ್ಚೊತ್ತಿದ
ಕಾವ್ಯವಸ್ತುವಾಗಬೇಕು
Fantastic poetry....
ಪ್ರತ್ಯುತ್ತರಅಳಿಸಿಧನ್ಯವಾದಗಳು 🙌
ಅಳಿಸಿ