ಈಗೊಂದು ಸೋನೆ ಮಳೆ
ತಲ್ಲಣ ಒಂದೆಡೆ,
ಜ್ವಾಲಾಗ್ನಿ ಒಂದೆಡೆ,
ಹೊತ್ತಿ ಉರಿಯುತಿತ್ತು
ಹೃದಯ...
ಹೊರಗೊಂದು ನಗು,
ಒಳಗೆ ಖಾಲಿ ಚಿಂತೆ
ಉತ್ತರವಿರದ ಪ್ರಶ್ನೆಗಳು,
ಬೆವರಿಳಿಸುವ ಕಲ್ಪನೆ
ಮಾತು ಮಾತಿಗೂ ಮೌನ
ಮೌನದೊಳಗೆ ಆಕ್ರಂದನ
ಮತ್ತೆ ಕಣ್ಣೀರು..
ಆದರೆ ಈಗೊಂದು,
ಸೋನೆ ಮಳೆ,
ಹೃದಯದಲಿ
ಬಯಸಿದ್ದೂ ಅಲ್ಲ,
ಎಣಿಸಿದ್ದೂ ಇಲ್ಲ,
ಅದೆಲ್ಲಿಂದ ಬಂತೋ,
ತಂಪು ತಂತು
ಕಾದ ಹೃದಯಕೆ,
ಕಾಯದೇ...
ಕರೆಯದೇ...
Super
ಪ್ರತ್ಯುತ್ತರಅಳಿಸಿಧನ್ಯವಾದಗಳು 🙌🙏
ಪ್ರತ್ಯುತ್ತರಅಳಿಸಿಉತ್ತಮ ವಾಗಿ ರಚನೆ ಮಾಡಿದ್ದೀರಿ ಧನ್ಯವಾದಗಳು 🙏🙏
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏☺️
ಅಳಿಸಿ