ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಈಗೊಂದು ಸೋನೆ ಮಳೆ

ತಲ್ಲಣ ಒಂದೆಡೆ, ಜ್ವಾಲಾಗ್ನಿ ಒಂದೆಡೆ, ಹೊತ್ತಿ ಉರಿಯುತಿತ್ತು ಹೃದಯ... ಹೊರಗೊಂದು ನಗು, ಒಳಗೆ ಖಾಲಿ ಚಿಂತೆ ಉತ್ತರವಿರದ ಪ್ರಶ್ನೆಗಳು, ಬೆವರಿಳಿಸುವ ಕಲ್ಪನೆ ಮಾತು ಮಾತಿಗೂ ಮೌನ ಮೌನದೊಳಗೆ ಆಕ್ರಂದನ ಮತ್ತೆ ಕಣ್ಣೀರು.. ಆದರೆ ಈಗೊಂದು, ಸೋನೆ ಮಳೆ, ಹೃದಯದಲಿ ಬಯಸಿದ್ದೂ ಅಲ್ಲ, ಎಣಿಸಿದ್ದೂ ಇಲ್ಲ, ಅದೆಲ್ಲಿಂದ ಬಂತೋ, ತಂಪು ತಂತು ಕಾದ ಹೃದಯಕೆ,  ಕಾಯದೇ... ಕರೆಯದೇ...