ಶ್ರೀರಾಮ

ಶ್ರೀರಾಮ



ರಾಮ ನಾನು ಕಾಯುತಿಹೆನು

ನಿನ್ನ ರೂಪು ನೋಡಲು 

ನೋಡಿ ಮನದುಂಬಿಕೊಂಡು 

ಬದುಕ ಸಫಲಗೊಳಿಸಲು


ಚಂಚಲತೆಯ ಮನಕೆ ನೀನು 

ಸ್ಥಿರತೆಯನ್ನು ನೀಡೆಯಾ

ಸೋತು ಹೋದ‌ಜೀವಕೆ

ಸಹಾನುಭೂತಿ ತೋರೆಯಾ


ನಿನ್ನ ಧ್ಯಾನ-ಭಕ್ತಿಯಲ್ಲಿ

ನನ್ನ ಮನವು ತುಂಬಲಿ

ಪ್ರತಿ ನಾಡಿ ಮಿಡಿತದಲ್ಲಿ

ನಿನ್ನ ನಾಮವೊಂದೇ ಕೇಳಲಿ


ದುರ್ವಿಚಾರ ದೂರವಾಗಿ

ಮನವು ಹಿಗ್ಗಿ ಕುಣಿಯಲಿ

ನಿನ್ನ ಮಮತೆಯೊಂದೇ

ಎನ್ನ ಪೊರೆವ ಶಕ್ತಿಯಾಗಲಿ


ತಾಯಿ ಆಸೆಯಿಂದ ಕಾಯ್ವ

ಮಗುವಿನಂತೆ ಕಾಯುವೆ

ನಿನ್ನ ನಾಮ ಸ್ಮರಣೆಯಲ್ಲೇ

ಎನ್ನ ಬದುಕ ಸವೆಸುವೆ


ರಾಮ ನಾನು ಕಾಯುತಿಹೆನು....

ಕಾಮೆಂಟ್‌ಗಳು