ಹಗ್ಗದ ಮೇಲಿನ ನಡಿಗೆ
ಆಕೆಯದು,
ಹೊಟ್ಟೆಪಾಡಿಗಾಗಿ ಹಗ್ಗದ ಮೇಲಿನ ನಡಿಗೆ
ಹಗ್ಗದ ಮೇಲವಳ ಗಮನವೋ, ಕೋಲಿನ ಮೇಲೋ..
ಉಹೂಂ, ಎರಡರ ಮೇಲೂ ಇದ್ದಂತಿಲ್ಲ..
ಅವಳು ಕಲಿತ ವಿದ್ಯೆಯದು,
ಅಭ್ಯಾಸವಾಗಿಬಿಟ್ಟಿದೆ..
ಬಿದ್ದೆನೆಂಬ ಭಯವಿಲ್ಲ,
ವಿಶ್ವಾಸವುಂಟು, ಅವಳ ಮೇಲವಳಿಗೇ...
ನಾಳೆ ಇನ್ನೆಲ್ಲೋ, ಹೊಟ್ಟೆಪಾಡೆಂತೋ
ಯಾವ ಚಿಂತೆಯಿಲ್ಲ,
ಏನರಿಯದ ಮೊಗದಲ್ಲಿ
ಮುಗ್ಧತೆಯಷ್ಟೇ...
ನನ್ನದು,,
ನನ್ನದೂ ಕಾಣದ ಹಗ್ಗದ ಮೇಲಿನ ನಡಿಗೆಯೇ...
ಗಮನ ಹೆಜ್ಜೆಯ ಮೇಲೋ, ದಾರಿಯ ಕಡೆಗೋ..
ಬದುಕು ಬಂದಂತೆಲ್ಲಾ ನಡೆದುಬಿಡಬೇಕು,
ಅಪ್ಪಿಯೋ ಒಪ್ಪಿಯೋ
ಸಾಗಿಬಿಡಬೇಕು
ಬಿದ್ದೆನೆಂಬ ಭಯವಿಲ್ಲ,
ನಂಬಿಕೆಯುಂಟು, ದೇವನೊಬ್ಬನ ಮೇಲೆ...
ನಾಳೆಯೆಂತೋ, ನನ್ನ ಒಯ್ಯುವುದೆಲ್ಲಿಗೋ..
ಚಿಂತೆಯೇತಕೆ,
ಹುಟ್ಟಿಸಿದವ ಹುಲ್ಲುಮೇಯಿಸದಿರಲು, ನಗುಮೊಗವಷ್ಟೇ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು😊🙏..