ನಾನೊಂದು ಚಿಟ್ಟೆಯಾಗಿದ್ದರೆ.....
ನಾನೊಂದು ಚಿಟ್ಟೆಯಾಗಿದ್ದರೆ.....
ಬಾನಂಗಳದಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದೆ
ಹೂವಿಂದ ಹೂವಿಗೆ ಪುಟಿಯುತ್ತಿದ್ದೆ
ಪುಷ್ಪರಸವ ಹೀರಿ ಸವಿಯುತ್ತಿದ್ದೆ
ಸರ್ವರ ಕಣ್ಮಣಿಯಾಗಿರುತ್ತಿದ್ದೆ
ಕ್ಷಣಕ್ಷಣಕ್ಕೂ ನೋಡುಗರಿಂದ ಮರೆಯಾಗುತ್ತಿದ್ದೆ
ಅರಸುವ ಕಣ್ಗಳಿಗೆ ಆಟವಾಗುತ್ತಿದ್ದೆ
ಎಲ್ಲರ ಮನಸ್ಸನ್ನು ಸೆರೆ ಹಿಡಿಯುತ್ತಿದ್ದೆ
ನಾನೊಂದು ಚಿಟ್ಟೆಯಾಗಿದ್ದರೆ.....
ನಾನು ಸಹ ನಿನ್ನಂತೆಯೇ ಸುಂದರ ಚಿಟ್ಟೆಯಾಗಿ ಆನಂದದಿ, ಹೂಗಳ ಮೇಲೆ ವಿಹರಿಸುತಿದ್ದೆ
ಪ್ರತ್ಯುತ್ತರಅಳಿಸಿ😃😃
ಅಳಿಸಿ