ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌

ಇಮೇಜ್
  ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಮಣಿಪಾಲದಲ್ಲಿರೋ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಬಗ್ಗೆ ತುಂಬಾ ಕೇಳಿರೋದ್ರಿಂದ, ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು. ಸ್ಥಳದ ಕುರಿತು ಸ್ವಲ್ಪ ವಿಷಯ ತಿಳಿದುಕೊಂಡೇ ಹೋಗಿದ್ರೂ, ಕೊಂಕಣ‌ ಸುತ್ತಿ ಮೈಲಾರಕ್ಕೆ ಬಂದ‌ ಹಾಗಾಗಿತ್ತು ನಮ್ಮ ಸ್ಥಿತಿ.‌ ಉಡುಪಿಯಿಂದ ಐದಾರು ಕಿಲೋಮೀಟರ್ ದೂರದಲ್ಲಿರೋ ಈ ಸ್ಥಳವನ್ನು ೧೦-೧೫ ಕಿಲೋಮೀಟರ್ ಮಾಡಿಕೊಂಡು ಅಂತೂ ಆ ಜಾಗವನ್ನು ತಲುಪಿದೆವು. ಪ್ರವೇಶ ದ್ವಾರದಲ್ಲೇ ಇರೋ ಕೌಂಟರ್ ಅಲ್ಲಿ ಇರೋ ವ್ಯಕ್ತಿಗೆ ಹಣವನ್ನು ನೀಡಿ, ಟಿಕೆಟ್ ತೆಗೆದುಕೊಳ್ಳಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿ ನೀಡುವ ಅವರು, ಅಲ್ಲೇ ಇರೋ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೇಳುತ್ತಾರೆ. ಸ್ಕ್ಯಾನ್ ಮಾಡಿದರೆ ಆ ಸ್ಥಳದಲ್ಲಿರೋ ೨೪ ಕಟ್ಟಡಗಳ ಸಂಪೂರ್ಣ ಮಾಹಿತಿ, ಅದರ‌ ವಿಶೇಷತೆಗಳಿರುವ ಕೈಪಿಡಿ ಲಭ್ಯವಾಗುತ್ತದೆ. ೧೯೯೭ ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ. ಹಸ್ತಶಿಲ್ಪ ಹೆರಿಟೇಜ್ ಹೌಸ್‌ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲಾ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ವಿವ...