ಮನದಾಳದ ಮಾತು - ೪
ಮನದಾಳದ ಇಂಗಿತವ, ಅದೆಂತಹ ಶಬ್ದಗಳ ದಾರದಿಂದ ಅದ್ಯಾವ ಭಾವನೆಗಳ ಮಣಿಗಳಿಂದ ಚೊಕ್ಕವಾಗಿ ಪೋಣಿಸಿ, ಮಾಲೆಯಾಗಿರಿಸಿದರೂ ಅದೊಂದು ಮಾಮೂಲಿ ಹಾರವಷ್ಟೇ ಮನವರಿಯಲು, ಮನಸಿಲ್ಲದವರಿಗೆ... ಮೌನವೇ ಲೇಸು, ಹೃದಯವ ಬಿಚ್ಚಿಡುವುದಕ್ಕಿಂತ... ಮೌನವೇ ಸೊಗಸು, ಮಾತಲ್ಲಿ ಸೋತು, ನೋವುಣ್ಣುವುದಕ್ಕಿಂತ..