ಅಮ್ಮ...
ಅಮ್ಮ…… ಸಂಸಾರ ನೌಕೆಯ 'ಹುಟ್ಟು' ಇವಳು.. ಅತ್ಯಮೂಲ್ಯ ಜೀವ ಹುಟ್ಟಿಸಿ, ತನ್ನ ಹುಟ್ಟಿಗೆ ಕಾರಣಳಾದವಳು.. ಕಷ್ಟಗಳ ತೆರೆ ಅಪ್ಪಳಿಸಿದರೂ.., ಹೋರಾಡುವಳು.. ಸಹಿಸಿ ಮುನ್ನಡೆವಳು.. ಅಮ್ಮಾ... ಹೊತ್ತವಳು..ಹೆತ್ತವಳು.. ಮಕ್ಕಳಿಗೆ ಪ್ರೀತಿಯ ಅರ್ಥವೇ ಈಕೆ.. ಮಮತೆಯ ಸ್ವರೂಪ.,ಆರಾಧ್ಯ ದೈವ.. ಗದರುವಳು.., ಬೆದರುವಳು, ಕೊನೆಗೆ , ತನ್ನೊಳಗೆ ಸಂಕಟ ಪಡುವಳು.. ಸುಂಟರಗಾಳಿಗೂ ಹೆದರದ ಅಮ್ಮ ಪರದಾಡುವಳು, ಮಗುವಿನ ಕೂಗಿಗೆ.. ತನ್ನೆಲ್ಲಾ "ಬೇಕು"ಗಳನ್ನು, ಆಸೆಗಳನ್ನು "ಬೇಡ"ವಾಗಿಸಿಕೊಂಡವಳು.. ತನ್ನ ಕನಸನ್ನು ಮಗುವಿನ ಕಣ್ಣಲ್ಲಿ ಕಾಣುವಳು.. ಸಹನಾಮೂರ್ತಿಯೂ ಈಕೆಯೇ.. ತ್ಯಾಗದ ಪ್ರತಿರೂಪವೂ ಈಕೆಯೇ.. ಅವಳೇ... ಅಮ್ಮಾ.. ನನ್ನಮ್ಮಾ.. ಮಕ್ಕಳ ಅಸ್ತಿತ್ವದಲ್ಲಿ ತನ್ನ ಇರುವಿಕೆಯನ್ನು ಕಾಣುವವಳು..