ಮೃಗವಲ್ಲ !! ಇವ “ಮಾನವ” !!
ಮೃಗವಲ್ಲ !! ಇವ “ ಮಾನವ ” !! ಕೇಳುತಿದೆ ಆಕ್ರಂದನ, 'ನೀವಿಲ್ಲದೆ ನಾವಿಲ್ಲ'. ಹಾಂ! ಅದು ಪ್ರಾಣಿಗಳದೆ! ಮಾನವ ಪ್ರಾಣಿ ಅಲ್ಲಿಲ್ಲ. ವಿರಾಮವಿಲ್ಲದ ಕಾರ್ಮಿಕನೀಗ, ಶ್ರಮವಿಲ್ಲ ಆತನಿಗಿಲ್ಲಿ 'ಸಸ್ಯಗಳ ಕೊಲ್ಲುತಿರುವೆ' ಎಂಬ ಹೆಮ್ಮೆಯಲ್ಲಿ! ಆಶ್ರಯ ಕಳಕೊಂಡ ಜೀವಿಗಳೆಷ್ಟೋ! ಪ್ರಾಣ ತೆತ್ತ ಪ್ರಾಣಿಗಳೆಷ್ಟೋ! ಮೂಡದು ಅನುಕಂಪವು ಆತನ ಕಟು ಹೃದಯದಲ್ಲಿ! ಸಾಧ್ಯವಿದು 'ಮಾನವ'ನಿಗೆ, ಕರುಣಾಹೀನನಿಗೆ ಹಣದ ಅಮಲಿನಲಿ, ದುರಾಸೆಯ ಮದವೇರಿ ಸ್ವಾರ್ಥದಿ ಆಕಾಶಕ್ಕೇರಿದೀತನಿಗೆ! ಪ್ರಕೃತಿಯ ಕೆಡಿಸಿ, ಭೂತಾಪ ಏರಿಸಿ ಸೃಷ್ಟಿಯಲಿ ವೃಷ್ಟಿಗಾಗಿ ದುಃಖಿಸುತಿಹ ಶುದ್ಧಪ್ರಾಣವಾಯುವಿಗಾಗಿ ಶೋಕಿಸುತಿಹ ಅತೀ ಬುದ್ಧಿವಂತ ಮೂರ್ಖನು! ಸರ್ವಜ್ಞಳಾಗಿ ಈ ಹುಚ್ಚಾಟ ನೋಡುತಿಹ ಕ್ಷಮಾಧಾರಿ ಧರಿತ್ರಿಯ ಈ ಮೌನ ಮಾತಾಗದೇ!? ಇನ್ನೂ ಹಿಂಸೆಯ ಮೌನದಿಂ ಸಹಿಸಿಯಾಳೇ..?!