ಮಕ್ಕಳ ಪದ್ಯ- ಗೂಡುಬಿಟ್ಟ ಗುಬ್ಬಚ್ಚಿಮರಿ



ಗೂಡಿಂದ ಹೊರಬಂದ ಗುಬ್ಬಚ್ಚಿಮರಿ ನಾನು,

ಅತ್ತೆ-ಮಾವ, ಅಜ್ಜಿ-ಅಜ್ಜ ಯಾರೂ ಇಲ್ಲ

ದೊಡ್ಡಬಂಗಲೆ, ಮೈದಾನ ಇಲ್ಲಿ, ಆದರೂ

ಆಡಲು ಅಣ್ಣ-ತಮ್ಮ, ಅಕ್ಕ-ತಂಗೀರಿಲ್ಲ


ಬೆಳದಿಂಗಳ ರಾತ್ರೀಲಿ, ಆಗಸದ ಚಪ್ಪರದಡಿ,

ಅಜ್ಜಿಯ ಕೈತುತ್ತು ಊಟಕ್ಕೆ ಸರಿಸಮವಿಲ್ಲ

ಬೆಳ್ಳಿಬಟ್ಟಲು, ಬಗೆಬಗೆ ತಿನಿಸು, ಇದ್ದರೂ

ಇಲ್ಲಿ  ಊಟಕ್ಕೆ ರುಚಿಯೇ ಇಲ್ಲ


ದೊಡ್ಡಪ್ಪ ತರುತ್ತಿದ್ದ ಮಿಠಾಯಿ-ಬತ್ತಾಸು,

ನಿದ್ರಿಸಲು ಅಜ್ಜಿಯ ಬಗೆಬಗೆ ಕತೆಗಳು

ಮನೆ ಚಿಕ್ಕದಾದರೂ ಖಾಲಿಯಲ್ಲ, ಅಲ್ಲಿ

ಮನಸು ಮುದುಡಿದ ಕ್ಷಣವೇ ಇಲ್ಲ


ಗೂಡಿಂದ ಹೊರಬಂದ ಗುಬ್ಬಚ್ಚಿಮರಿ ನಾನು,

ಭೂತದಬಂಗಲೆಯೊಳ ಹೊಕ್ಕಂತಿದೆ

ಅಪ್ಪ-ಅಮ್ಮ ಇಲ್ಲಿ, ಮತ್ತೇ ಅದೇ ಮೌನ

ವಿಭಕ್ತತೆಯ ಬೇಸರ ಮಡುಗಟ್ಟಿದೆ

ಕಾಮೆಂಟ್‌ಗಳು

  1. 👍 ಬಹಳ ಸುಂದರವಾಗಿದೆ, ಕವನ.
    "ಸಂಬಂಧ"ಗಳ ಅಗತ್ಯ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಪ್ರಯತ್ನದ ಉದ್ದೇಶ ಸಪಲವಾಗಲಿ, ಇದರ ಅವಶ್ಯಕತೆಯ ಅರಿವಿನ ಜ್ಞಾನ ಎಲ್ಲೆಲ್ಲೂ ವೇಗವಾಗಿ ಪಸರಿಸಲಿ ಎಂದು ಹಾರೈಸುತ್ತಾ.... ಪ್ರಾರ್ಥಿಸುತ್ತಾ ...... 🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..