ನನ್ನ ಕನಸಿನ ಭಾರತ
ಭ್ರಾತೃತ್ವದ ಬೀಜ ಬಿತ್ತಿ
ಸದ್ಧರ್ಮವ ಪಸರಿಸಿ
ತಿಕ್ತತೆಯ ತೊಡೆದು ಹಾಕಿ
ಸುಧೆ ನೀಡಲಿ ಭಾರತ..
ಸಾಕ್ಷರತೆಯ ಮಡಿಲಿನಲಿ
ಮಾನವತೆಯ ಗುಡಿಯಲಿ
ಹಿತಮಿತದ ಅರಿವಿನಲಿ
ಸತ್ಕರ್ಮ ಮಾಡಲಿ ಭಾರತ..
ದಾರಿದ್ರ್ಯದ ನಿರ್ಮೂಲದಲಿ
ಅನಾಚಾರಗಳ ಅಂತ್ಯದಲಿ
ಮತಭೇದಕೆ ಎಡೆಗೊಡದೆ
ಐಕ್ಯತೆಯಿಂದಿರಲಿ ಭಾರತ..
ಪ್ರಕೃತಿಯ ರಕ್ಷಣೆಯಲಿ
ಪ್ರೀತಿ-ದಯೆ-ಶಾಂತಿಯಲಿ
ಏಳ್ಗೆಯ ಪಥದಿ ಸಾಗಿ
ಜಗದ್ಗುರುವಾಗಲಿ ಭಾರತ..
Super😘😍
ಪ್ರತ್ಯುತ್ತರಅಳಿಸಿThank you 🥰
ಅಳಿಸಿSuper 😍
ಪ್ರತ್ಯುತ್ತರಅಳಿಸಿThank you 😊
ಅಳಿಸಿಒಳ್ಳೇದಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದ 😊
ಅಳಿಸಿಸೂಪರ್ ಮೇಡಂ
ಪ್ರತ್ಯುತ್ತರಅಳಿಸಿಧನ್ಯವಾದ 🙏
ಅಳಿಸಿ