ನಿರೀಕ್ಷೆ

 




 ನಿನ್ನ ಬರುವಿಕೆಯ ನಿರೀಕ್ಷೆಯಲಿ,

ಈ‌ ಬದುಕಿನ ಪರೀಕ್ಷೆಯಲಿ,

ಬಸವಳಿದಿದೆ ಆ ಮನಸು..

ಬರಿದಾಗಿಹ ಕನಸುಗಳಲಿ,

ಬೆದರಿಸುವ ಭ್ರಮೆಯಲಿ,

ಬೆಂಗಾಡಾಗಿದೆ ಆ ಮನಸು..

ಮಾಯಾವಿ...

ಬೆತ್ತಲಲ್ಲ ಬದುಕು, ಕತ್ತಲಲ್ಲ ಕನಸು

ನಿಜವಾದರೆ,,,

ಆ ಮನಸ ಕೊಲ್ಲದಿರು

ನಿರೀಕ್ಷೆಗೆ ನಿರುತ್ತರ ನೀಡದಿರು... 

ಕಾಮೆಂಟ್‌ಗಳು

  1. ದೇವರ ಅಧ್ಬುತ ಸೃಷ್ಟಿ ಹೆಣ್ಣು,
    ಸುಂದರ ಅಮೂಲ್ಯ ಅಪ್ರತಿಮ ಪ್ರತಿಮೆ ನೀನು,
    ನಿನಗೇಕೆ ನಿರೀಕ್ಷೆಯ ಗೊಡವೆ !?
    ಮಾಯಾವಿಯ ನಿರೀಕ್ಷೆಯಲ್ಲಿ ಬಸವಳಿಯದಿರು,
    ಯುಗಾದಿಯ ಹಗಲಿನಲ್ಲಿ ದುಂಡು ಮಲ್ಲಿಗೆಯನೊತ್ತು
    ಬಂದೇ ಬರುವನು ನಿನ್ನ ಆರಾಧಕ
    ನೀನೇಂದೂ ಕಾಯದಿರು....

    ಪ್ರತ್ಯುತ್ತರಅಳಿಸಿ
  2. ಖಂಡಿತ. ನೀವು ಬೆನ್ನು ತಟ್ಟಿ ಪ್ರೋತ್ಸಾಹಿಸುವಾಗ, ಉತ್ಸಾಹ ಇಮ್ಮಡಿಯಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಬೆತ್ತಲಲ್ಲ ಬದುಕು ಕತ್ತಲಲ್ಲ ಕನಸು.... ಇಡೀ ಕವಿತೆಗೆ‌ ಮೆರಗು ನೀಡಿದ ಶಬ್ನಗಳು....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..