ಸಣ್ಣ ಕಥೆ-೨

ಚಿತ್ರ: ವೈಷ್ಣವಿ ಕೆ 


ಪ್ರವಾಸ 

"ನಾವು ಪ್ರವಾಸಕ್ಕೆ ಬಂದಿರುವುದು" ಎಂಬ ಪರ ಊರಿನವರ ಸಂಭಾಷಣೆಯನ್ನು ಕೇಳಿ, ಅಲೆಮಾರಿ ಜನಾಂಗದ ಮಗುವೊಂದು ತಾಯಿಯ ಬಳಿ ಬಂದು,  "ಅಮ್ಮ, ಪ್ರವಾಸ ಅಂದ್ರೆ ಏನು?" ಕೇಳಿತು. "ಅದೇ ಪುಟ್ಟ, ನಾವು ಒಂದೂರಿಂದ ಇನ್ನೊಂದು ಊರಿಗೆ ಹೋಗ್ತೀವಲ್ಲ, ಅದನ್ನೇ ದೊಡ್ಡ ಮನುಷ್ರು ಪ್ರವಾಸ ಅಂತಾರೆ. ನಾವು ಪಾದಯಾತ್ರೆ ಮಾಡಿದ್ರೆ, ಅವ್ರು ರಥಯಾತ್ರೆ ಮಾಡ್ತಾರೆ. ನಾವು ಹೊಟ್ಟೆಪಾಡಿಗಾಗಿ ಹೋದ್ರೆ, ಅವ್ರು ಖುಷಿಗಾಗಿ ಹೋಗ್ತಾರೆ ಅಷ್ಟೇ ಮಗಾ...!" ಎಂದು ಹೇಳಿ ಮುಗಿಸುವಷ್ಟರಲ್ಲಿ ತಾಯಿಗರಿವಿಲ್ಲದೆ, ಅವಳ ಕಣ್ಣಂಚು ಒದ್ದೆಯಾಗಿತ್ತು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..