ಕನಸು





ಕನಸಿನ ಕಮ್ಮರಿ ಧುಮ್ಮಿಕ್ಕಿ

ಕಮನೀಯ ಕಣ್ತಂಪನಿಕ್ಕಿ

ಕನವರಿಕೆಯ ಕಣಿಯಾಗಿ

ಕಗ್ಗಂಟು ನಾ ಬಿಡಿಸುವೆ..


ಚಿತ್ತಚಾರಿ  ಚರಿತ್ರೆಯಲಿ

ಚಂದ್ರಕಿಯ ಚಮತ್ಕಾರದಲಿ

ಚೈತನ್ಯದ ಚಿಲುಮೆಯಾಗಿ

ಚಂದ್ರಜ್ಯೋತಿಯಾಗುವಾಸೆ..


ಬಾಲಾತಾಪ ಬಾನಿನಲಿ

ಬಿಂದಲದ ಬೆಡಗಿನಲಿ

ಬಕುಳದ    ಭಗವಾಗಿ

ಝೇಂಕರಿಪ ಭೃಂಗವಾಗುವಾಸೆ..


ವತ್ಸಲದ ವನಧಿಯಲಿ

ವರ್ಣದ ವರ್ಷಣದಲಿ

ವಿಭಾಸಿ ವಾಜಿಯಾಗಿ

ವಿಹಂಗಮಿಸುವಾಸೆ...


ಸತ್ಕುಲದ ಸುಕೃತಿಯಲಿ

ಸತ್ಕೀರ್ತಿಯ ಸರಿತ್ತಿನಲಿ

ಸ್ವಚ್ಛಂದ ಸ್ಫೂರ್ತಿಯಾಗಿ

ಸ್ವಪ್ನಸ್ಪರ್ಶಕೆ ಸಹಿಯಿಡುವೆ..

ಕಾಮೆಂಟ್‌ಗಳು

  1. ಹಾಯ್ ಸರ್ ನಿಮ್ಮ ಕವನ ಅಭೂತ ಪೂರ್ಣ ವಾಗಿದೆ

    ಪ್ರತ್ಯುತ್ತರಅಳಿಸಿ
  2. ಕವನ ಸೂಪರಾಗಿದೆ ಮೇಡಂ.ನಾನು ಸಿನೆಮಾದವನು( ಸ್ಟೋರಿ ರೈಟರ್) ನಮಗೆ ಸಾಂಗ್ ಏನಾದ್ರು ಬೇಕಾದ್ರೆ ಹೇಳ್ತೀನಿ ಬರೆದು ಕೊಡ್ತೀರಾ ಮೇಡಂ?

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..