ಅನುರಾಗ (ಭಾಗ ೧)


 ಸಿರಿವಂತ, ಗುಣವಂತ ಪ್ರತಾಪ್ ಮತ್ತು ಮೀನಾಕ್ಷಿ ದಂಪತಿಯ ಒಬ್ಬನೇ ಪುತ್ರ ಋತ್ವಿಕ್. ತಂದೆ-ಮಗ ಇಬ್ಬರೂ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ಸ್. ತಮ್ಮ ಊರಿನ ಹಲವಾರು ಸುಂದರ ಮನೆಗಳು, ಕಟ್ಟಡಗಳ ನಿರ್ಮಾಣದಲ್ಲಿ ಮಹತ್ತರ ಕೊಡುಗೆದಾರರಾಗಿದ್ದರು. 

ಇಪ್ಪತ್ತೈದರ ಸುಂದರ, ಸಾಧಾರಣ ಮೈಕಟ್ಟಿನ ಋತ್ವಿಕ್ ಮೇಲೆ ಹಲವಾರು ಹೆಣ್ಣುಮಕ್ಕಳ, ಹೆಣ್ಣುಹೆತ್ತವರ ಕಣ್ಣು ಅದಾಗಲೇ ಬಿದ್ದಿತ್ತು. ಆದರೆ ಋತ್ವಿಕ್ ಇನ್ನೂ ಒಂದೆರೆಡು ವರುಷಗಳು ಮದುವೆಯ ವಿಚಾರ ತೆಗೆಯದಿರುವಂತೆ ಹೆತ್ತವರಿಗೆ ತಿಳಿಸಿದ್ದ. 

ಅಂದು ಶನಿವಾರ, ಮುಸ್ಸಂಜೆ ಪ್ರತಾಪ್ ಮತ್ತು ಮೀನಾಕ್ಷಿಯವರು ಮನೆಯ ಹೂದೋಟದ ಬಳಿ ಮಾತನಾಡುತ್ತಿರುವಾಗ ಫೋನ್ ರಿಂಗಣಿಸಿತು. ಫೋನ್ ಕಿವಿಗಿರಿಸಿದ ಪ್ರತಾಪ್ಗೆ ಬಹುದೊಡ್ಡ ಆಘಾತ ಕಾದಿತ್ತು. ಮನೆಗೆ ಕಾರಿನಲ್ಲಿ ಬರುತ್ತಿದ್ದ ಋತ್ವಿಕ್ಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದು ತಿಳಿದುಬಂತು. ಭಯ, ದುಃಖ ಒಮ್ಮೆಲೇ ಉಮ್ಮಳಿಸಿ ಬಂತು. ಇಬ್ಬರೂ ಕೂಡಲೇ ಆಸ್ಪತ್ರೆಗೆ ಧಾವಿಸಿದರು. 

ಅರ್ಧಗಂಟೆಯ ನಂತರ ತುರ್ತು ನಿಗಾ ಘಟಕದಿಂದ ಹೊರಬಂದ ವೈದ್ಯರು, ಋತ್ವಿಕ್ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು ಕೋಮಾಗೆ ಜಾರಿರುವುದಾಗಿ‌ ತಿಳಿಸಿದರು. ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು ಪ್ರತಾಪ್ ದಂಪತಿಗೆ. ಯಾವ ದೇವರಿಗೆ ಹರಕೆ ಕಟ್ಟುವುದು, ಯಾವ ದೇವರಲ್ಲಿ ಮೊರೆ ಹೋಗುವುದು ಎಂಬುದೂ ತಿಳಿಯದಾಗಿತ್ತು. ಬದುಕಿ ಬಾಳಬೇಕಾದ ಮಗ ಹೀಗೆ ಕಣ್ಣಮುಂದೆ ಮಲಗಿರುವುದು ನೋಡಿ, ನಮಗೆ ಹೀಗಾಗಬಾರದಿತ್ತೇ ಎಂದು ಗೋಗರೆದರು. ಕಣ್ಣೀರು ಒರೆಸಿಕೊಳ್ಳಲೂ ಕೈಗಳು ನಡುಗುತ್ತಿದ್ದವು. ಇಬ್ಬರಲ್ಲೂ ಮೌನ ಮನೆಮಾಡಿತ್ತು. 


.....ಮುಂದುವರಿಯುವುದು.

.

.

ಚಿತ್ರ: ವೈಷ್ಣವಿ ಕೆ



ಕಾಮೆಂಟ್‌ಗಳು

  1. ಉತ್ತಮ ಪ್ರಾರಂಭ, ಬದುಕಿನ ತಿರುವೀಗಳಿಗೆ ಹೊಂದಿಕೊಳ್ಳುವುದ ಅನಿವಾರ್ಯವಾದರೂ.. ನೋವನ್ನು ಅನುಭವಿಸುವುದು ಕಷ್ಟ.... ನೋಡೋಣ ಮುಂದಿನ ಭಾಗ....

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ನಿಮ್ಮ ಬೆಂಬಲ ಹೀಗೆಯೇ ‌ಸದಾ ಇರಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..