ಶುನಕದ ಸಾಂಗತ್ಯ
ಸಂಕಟದ ಮಡುವಲಿ
ಮೂಕೀಭಾವದಲಿ ನಾನಿರಲು
ಸಹಾನುಭೂತಿಯ ಖಣಿಯಾಗಿ
ಶುನಕವು ಸಾಂಗತ್ಯವಾಯ್ತು..
ನೀರವತೆಯ ನರ್ತನದಲಿ
ಮನಶೈತ್ಯ ಬಯಸುತಿರಲು
ವಿಧೇಯತೆಯ ಅನ್ವರ್ಥವಾಗಿ
ನನ್ನ ಮನವ ಗೆದ್ದಿತು...
ಅರ್ಥೈಸಿಕೊಂಡಂಥ ಭಾವದಲಿ
ಮೌನದಲೇ ಸಾಂತ್ವಾನಿಸುತಿರಲು
ಮೂಕಪ್ರಾಣಿ ಶುನಕವು
ನನ್ನ ಪ್ರಾಣ ಸ್ನೇಹಿಯಾಯ್ತು..
ತಿರುಗಿದಲ್ಲಿ ಹಿಂಬಾಲಿಸಿ
ನನಗೆ ಒರಗಿ ಕುಳಿತಿರಲು
ಕೊರಗೂ ಕರಗಿ ಹೋಗಿ
ಮೊಗದಲಿ ನಗು ಮೂಡಿಸಿತು..
ಮನುಜರಿಗಿಂತ ಶುನಕಗಳೇ
ನಂಬಲರ್ಹ ಎನಿಸಿರಲು,
ಕೊಟ್ಟ ನಾಲ್ಕು ತುತ್ತಿಗೂ
ಸಾರ್ಥಕ್ಯ ಭಾವ ಮೂಡಿತು..
Super❣😘
ಪ್ರತ್ಯುತ್ತರಅಳಿಸಿThank you 🥰
ಅಳಿಸಿNice😀☺️
ಪ್ರತ್ಯುತ್ತರಅಳಿಸಿThank you 😊
ಅಳಿಸಿNice😀☺️
ಪ್ರತ್ಯುತ್ತರಅಳಿಸಿNice😀☺️
ಪ್ರತ್ಯುತ್ತರಅಳಿಸಿNice 🙂
ಪ್ರತ್ಯುತ್ತರಅಳಿಸಿThank you 😊
ಅಳಿಸಿSuper 👌💐
ಪ್ರತ್ಯುತ್ತರಅಳಿಸಿಧನ್ಯವಾದಗಳು 😊
ಅಳಿಸಿತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿ