ಕಿವುಡಿಯ ದೌರ್ಭಾಗ್ಯ
ಸೌಂದರ್ಯ ನೋಡಿ ಪ್ರತಿಭೆ ಗುರುತಿಸುತ್ತಿದ್ದೆನಲ್ಲ,
ನಿನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟಿದ್ದೆನಲ್ಲ
ಅದಕ್ಕಾಗಿ ನನ್ನ ಕ್ಷಮಿಸುವೆಯಲ್ಲಾ?
ನನ್ನ ನಲ್ಮೆಯ ಮುದ್ದು ಕೋಗಿಲೆ..
ನಿನ್ನ ಹಾಡನ್ನು ಕೇಳುವ ಭಾಗ್ಯ ನನಗಿಲ್ಲ
ಆದರೂ ನಿನ್ನ ನೋಡುವ ಸೌಭಾಗ್ಯ ನನಗಿದೆಯಲ್ಲ!
ಅದರಲ್ಲೇ ಸಂತಸಪಡಬೇಕಲ್ಲಾ,
ನನ್ನ ನಲ್ಮೆಯ ಮುದ್ದು ಕೋಗಿಲೆ..
ನಿನ್ನ ಹಾಡಿಗೆ ಮಾರುಹೋಗದವರಿಲ್ಲ,
ಅದ ನೋಡಿ ಸಾಕಷ್ಟು ನೊಂದಿಹೆನಲ್ಲ..
ಕಿವಿಯಿದ್ದರೂ ಕೇಳಲಾಗದಲ್ಲಾ.!
ನನ್ನ ನಲ್ಮೆಯ ಮುದ್ದು ಕೋಗಿಲೆ..
ಈ ನನ್ನ ಪಾಡನ್ನು ಯಾರಿಗೆ ಹೇಳಲಿ?
ನಿನ್ನ ಮಧುರ ಕಂಠವ ನಾ ಹೇಗೆ ಕೇಳಲಿ?
ನನ್ನ ಭಾವನಾಂತರಾಳದಲ್ಲಿರುವ ನಿನ್ನ ನೋಡಿಯೇ
ಆನಂದಿಸುವೆ ನಾ, ನನ್ನ ನಲ್ಮೆಯ ಮುದ್ದು ಕೋಗಿಲೆ..
Super♥️😍
ಪ್ರತ್ಯುತ್ತರಅಳಿಸಿThank you🥰
ಅಳಿಸಿNi ce
ಪ್ರತ್ಯುತ್ತರಅಳಿಸಿಧನ್ಯವಾದ 😊
ಅಳಿಸಿ