ಬದುಕು ಬದಲಾಗಿದೆ


 ಬದುಕು ಬದಲಾಗಿದೆ,

ನಾ ಬಯಸುವ ಹಾಗೆ

ಹೊರಗಲ್ಲ, ನನ್ನೊಳಗೆ!


ಕಾಡುವ ಒಂಟಿತನವಿಲ್ಲ,

ಬೇಸರಕೆ ಕಾರಣಗಳಿಲ್ಲ

ಖುಷಿಯ ವಿನಹ, ಬೇರೇನಿಲ್ಲ!


ಕಣ್ತೆರೆದರೆ ಹಸಿರಿದೆ,

ಸ್ವಚ್ಚಂದಚ್ಛಂದ ಮನಸಿದೆ

ಆದರೂ, ಕಾಡುವ ಭಯವಿದೆ!


ಮತ್ತೆ ಬೆಂಗಾಡ ಸೇರಲು,

ಮನಸೊಲ್ಲದ ಬಾಳಿಗೆ ಬೆಂಡಾಗಲು

ನಗುವಲ್ಲದ ನಗುವ, ಹೊತ್ತೊಯ್ಯಲು!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..