ಸಣ್ಣ ಕಥೆ-೧


 ನೆನಪಿನ ಮೆಲುಕು


ದಿವ್ಯ, ಭವ್ಯ ಆತ್ಮೀಯ ಗೆಳತಿಯರು. ಅವರ ಸ್ನೇಹವು ಎಷ್ಟಿತ್ತೆಂದರೆ, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು! ಇಬ್ಬರೂ ಬುದ್ಧಿವಂತರಾದರೂ, ದಿವ್ಯಳ ಅಂಕ ಭವ್ಯಳಿಗಿಂತ ಹೆಚ್ಚಿರುತ್ತಿತ್ತು. ಭವ್ಯ ಎಂದೂ ಅಸೂಯೆ ಪಟ್ಟವಳಲ್ಲ. ಆದರೆ ಕೊನೆಯ ವಾರ್ಷಿಕ ಪರೀಕ್ಷೆಯಲ್ಲಿ ಭವ್ಯಳ ಅಂಕ ದಿವ್ಯಳಿಗಿಂತ ಜಾಸ್ತಿಯಿತ್ತು. ಈರ್ಷ್ಯೆ ಪಟ್ಟ ದಿವ್ಯ, ಅಂದಿನಿಂದ ಮಾತನಾಡುವುದನ್ನೇ ನಿಲ್ಲಿಸಿದಳು. ಭವ್ಯಳಿಗೆ ಕಾರಣ ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಾತನಾಡಲು ಯತ್ನಿಸಿ, ಸೋತು, "ಸ್ನೇಹವು ಪ್ರೀತಿ, ನಂಬಿಕೆಯನ್ನೊಳಗೊಂಡಿರಬೇಕೇ ಹೊರತು, ಅಸೂಯೆಯನ್ನಲ್ಲ" ಎಂದರಿತು ಸುಮ್ಮನಾದಳು.

ಈಗಲೂ ಜೇಡ ಕಟ್ಟಿದ ಮೂಲೆಯಿಂದ ಕಳೆದ ಕ್ಷಣಗಳು, ನೆನಪುಗಳು ಇಣುಕಿ ಇಣುಕಿ ಅಪಹಾಸ್ಯ ಮಾಡುತ್ತಲೇ ಇವೆ.

ಕಾಮೆಂಟ್‌ಗಳು

  1. ಅಭಿಪ್ರಾಯಕ್ಕೆ ಶರಣು🙏... ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ....
    ಓದುತ್ತಿರಿ....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..