ಮತ್ತದೇ ದಿನಗಳ ನೆನಪು




...
ಮತ್ತದೇ ದಿನಗಳ ನೆನಪು ,

ಕಾಡಿವೆ ಕುಂತಲ್ಲಿಯೇ

ಕೂಡಿಕಳೆದು ತೂಗಿಸಿದರೂ,

ಮನದ ಭಾರಕೆ ಸೋತಂತಿದೆ..


ಭಾವನೆಗಳ ಛಾವಣಿಯಲಿ,

ಮರೆವು ಎಲ್ಲಿಯೋ ಇಣುಕಿದೆ

ಮತ್ತೆ, ಮೆಲ್ಲಗೆ ನೋವ ಸುಳಿಯಲಿ,

ಹೃದಯ ಏತಕೋ ಬೆಂದಿದೆ..

ಕಾಮೆಂಟ್‌ಗಳು

  1. ಕಳೆದು ಹೋದ ದಿನಗಳ ನೆನಪೇಕೆ?
    ಹೋದದ್ದು ಹೋಗಾಯ್ತು,
    ಬರಲಿರುವ ಭಾಗ್ಯ ಭರಪೂರಿನಷ್ಟಿದೆ.
    ಮಾಸಿದ ಒಳಗನ್ನಡಿಯನ್ನೋಮ್ಮೆ
    ಒರೆಸಿ ನೋಡು, ನೋವನ್ನು ಅಳಿದು
    ಹೃದಯ, ನಲಿವಿನ ಬುಗ್ಗೆಯಲಿ ತೇಲಲಿಚ್ಚಿಸಿದೆ....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೆನಪು ಹಾಗೆಯೇ ಅಲ್ಲವೇ! ವರವೂ ಹೌದು, ಶಾಪವೂ ಹೌದು

      ಅಳಿಸಿ
    2. ಅದು ವರ ಆಗಬೇಕೆ ಇಲ್ಲ ಶಾಪ ಆಗಬೇಕೆ ನಮ್ಮ ಮನಸ್ಸಿಗೆ ಬಿಟ್ಟಿದ್ದು. ವರವಾಗುವ ನೆನಪುಗಳನ್ನು ನೆನೆಯುತ್ತ ಶಾಪವಾಗುವ ನೆನಪುಗಳನ್ನು ಮರೆಯುತ್ತಾ ಹೋದರೆ ಬದುಕು ಸುಂದರ ಮತ್ತು ಸರಳವಾಗುತ್ತದೆ

      ಅಳಿಸಿ
  2. ಸಣ್ಣನೆಯ ನಗುವು ಮಗುವಿನಂತೆ
    ದೇವ ಪೀಲ್ವನು ದುಃಖ ನಮ್ಮ ಅರಿವಿನ ಆಯ್ಕೆಯ ಬುತ್ತಿ ಹೊತ್ತಂತೆ
    ಮನಸ್ಸು ಬಾರವಾದರೆ ನಕ್ಕುಬೀಡಬೇಕು ನೆನಪುಗಳ ಮಗುವಿನಂತೆ .

    ನಿಮ್ಮ ಬರವಣಿಗೆ ಚೆನ್ನಾಗಿದೆ .

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..