ಮಾಯಾಲೋಕ
ಮಾಯಾಲೋಕ ಭಾವನೆಗಳಿಗೆ ಅವಮಾನವಿಲ್ಲ.. ಬೇಸರ, ಕೋಪವೂ ಅಲ್ಲಿಲ್ಲ.. ಶಾಂತತೆಯ ಮಡುವಲಿ ತೃಪ್ತ ಸುಪ್ತ ಸಾಗರದಲಿ ಈ ನನ್ನ ಲೋಕವಿತ್ತು.. ಸುಮದ ಘಮದೊಳು ಮಧು ಹೀರುವ ದುಂಬಿಯು ಸಕಲ ಜೀವಿಗಳೂ ಸಂತಸವ ಹೊರಹಾಕುತಿತ್ತು.. ವಂಚಕ, ಲಂಚಕರಿಲ್ಲ.. ಕಾಮಿಗಳು, ಕ್ರೂರಿಗಳಿಲ್ಲ.. ಸುಗುಣ ಮಾನವನೊಳ್ ಸುವಿಚಾರಗಳಷ್ಟೇ ಇತ್ತು.. ತರತಮ ಭಾವವಿಲ್ಲ.. ಸಮಾನತೆಯೇ ಎಲ್ಲಾ.. ಐಕ್ಯತೆ ಹೊಂದಿದ ಜೀವಿಗಳಲಿ ಸಹಬಾಳ್ವೆ ಇತ್ತು.. ಶೋಷಣೆ, ಕಣ್ಣೀರಿಗೆ ಜಾಗವಿಲ್ಲ.. ಬಂಧು ಬಾಂಧವರೇ ಎಲ್ಲಾ.. ಇಹುದೆಲ್ಲಿ ಈ ಲೋಕ ? ಕನಸಿನ ನನ್ನರಮನೆಯಲ್ಲಿ.. ನನ್ನದೇ ಮಾಯಾಲೋಕದಲ್ಲಿ..