ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಪ್ಪಾದ ಬದುಕು

 "ನಾನು‌ ಹೇಳ್ತಿರೋದನ್ನ ಅರ್ಥ ಮಾಡಿಕೊಳ್ಳಿ ಅಪ್ಪಾ". "ಹಾಂಗಲ್ಲ ಮಗಾ. ಯಾವ್ದೋ ದೇಶಕ್ಕೆ ಹೋಗಿ, ಎಲ್ರಿಂದ‌ ದೂರ ಇದ್ದು ಗಳಿಸೋ ಹಣ ಎಷ್ಟ್ ಸುಖ, ನೆಮ್ದಿ ಕೊಡುತ್ತೆ". "ಅಂದ್ರೇನು ನಿಮ್ಮ ತರಾನೇ ಇದೇ ಹಳ್ಳೀಲಿ ಬಿದ್ದಿರು ಅಂತೀರಾ?" "ಹಳ್ಳಿ ಆದ್ರೇನ್, ಪಟ್ಣ ಆದ್ರೇನ್ ಜೀವ್ನ ಮಾಡುಕೆ. ಅಲ್ದೇ ನಮ್ಗಿರೋದ್ ನೀನೊಬ್ನೆ ಮಗಾ". "ಹಾಂ! ಈಗ ಗೊತ್ತಾಯ್ತು. ಸತ್ಯ ನಿಮ್ಮ ಬಾಯಿಂದಾನೇ ಹೇಗೆ ಹೊರಗೆ ಬಂತು ನೋಡಿ. ಈ ಹಳ್ಳೀಲಿ ಬೇಸಾಯ ಮಾಡ್ಕೊಂಡು, ಕತ್ತೆ ಹಾಗೆ ನಿಮ್ಮ ಚಾಕರಿ ಮಾಡ್ಕೊಂಡು ಬಿದ್ದಿರು ಅಂತಿದೀರ. ಆಗೋದೇ ಇಲ್ಲ. ಇನ್ನು ಇದರ ಬಗ್ಗೆ ಮಾತು ಬೇಡ" ಎಂದು ಅಪ್ಪನ ಕಡೆ ತಿರುಗಿಯೂ ನೋಡದೆ, ಚಾವಡಿಯಿಂದ ಬಿರಬಿರನೆ ಹೊರನಡೆದ ಮಗ ಸಿದ್ದು. ತಂದೆ ವೆಂಕಟಯ್ಯ ಅಸಹಾಯಕತೆಯಿಂದ ತಮ್ಮ ಪತ್ನಿ ಗಿರಿಜಮ್ಮನ  ಕಡೆ ನೋಡಿದರು. ಗಿರಿಜಮ್ಮ ಸೆರಗಿನಲ್ಲಿ ಕಣ್ಣೀರನ್ನು ಒರೆಸಿಕೊಳ್ಳುತ್ತ "ನಮ್ಮ ಹಣೆಬರಹ ಅಷ್ಟೇ. ಅವ್ನು ಏನಾದ್ರೂ ಮಾಡ್ಕೊಳ್ಳಿ. ನೀವೇನೂ ಅನ್ಬೇಡಿ"‌ ಎಂದರು. ಮಗನಿಗೆ ಪ್ರತಿಷ್ಠೆ, ಹಣ, ಹೆಸರೇ ಮುಖ್ಯವಾಗಿತ್ತು. ವಯಸ್ಸಾದ ಹೆತ್ತವರಲ್ಲ. ಮಗ ಸುಖವಾಗಿರಬೇಕು‌ ಎಂದು ಹೆತ್ತವರು ಪಟ್ಟ ಕಷ್ಟ ಹೇಗೆ ತಾನೇ ಅರ್ಥವಾಗಬೇಕು. ಮರುದಿನವೇ ತನ್ನ ಸಾಮಗ್ರಿಗಳನ್ನು ತೆಗೆದುಕೊಂಡು ಹೊರಡಲು ತಯಾರಾದ. "ನನ್ನ ಬಗ್ಗೆ ನಿಮಗೆ ಚಿಂತೆ ಬೇಡ. ನಾನಿನ್ನು ವಾಪಾಸ್ಸಾಗುವುದು ಎಂದೋ ನನಗೇ ...