ಮನದಾಳದ ಮಾತು-೧
ಎಷ್ಟೋ ಮಾತುಗಳು ನೇರವಾಗಿ ಹೇಳಲಾಗದೆ ಅಥವಾ ಸಂದರ್ಭಗಳು ದೊರಕದೆ ಮನಸ್ಸಿನೊಳಗೇ ಉಳಿದುಬಿಡುತ್ತದೆ. ಅಂತಹ ಉಳಿದ, ಹುದುಗಿ ಹೋದ, ಅವಿತ ಮಾತುಗಳೆಲ್ಲಾ ಒಮ್ಮೊಮ್ಮೆ ಹೊರಬರುವುದು ಲೇಖನಿ ಹಿಡಿದಾಗ ಮಾತ್ರ. ಅದೇ ಮನದಾಳದ ಮಾತು.... ಮಾತೇನೋ ಹೊರಬಂದಾಯ್ತು. ಅರಿಯುವ ಪ್ರಯತ್ನ ಮಾಡಬೇಕಷ್ಟೇ... ತಿಳಿಯೊಮ್ಮೆ, ಚಿಂತಿಸು ಮಗದೊಮ್ಮೆ ನೀನೊಬ್ಬರ ಕುರಿತು ಬಡಬಡಿಸುವ ಮೊದಲು.. ಸಾಧ್ಯವಾದಲ್ಲಿ ಸ್ಪಂದಿಸು, ಅಸಾಧ್ಯವಾದಲ್ಲಿ ಮೌನವಹಿಸು ಅವರ ಕಷ್ಟಗಳಿಗೆ ನಿನ್ನದೇ ಆದ ರೂಪ ಕೊಡುವ ಬದಲು.. ನಿನ್ನನುಭವದ ಕಥನಗಳೇ ಆಗಿರಬಹುದು ಆದರೂ, ಅನುಭವದಲಿ ಭಿನ್ನತೆಯಿರಲು ಅನುಭವವ ಅನುಭವಿಸುವವರೇ ಬಲ್ಲರು..